ಸುರೇಶ್ ಚಂದ್ರ ಮಿಶ್ರಾ (೧೯೦೩ - ೩೦ ಮಾರ್ಚ್ ೧೯೯೩) ಇವರನ್ನು ಪಂಡಿತ್ ಸುರೇಶ್ ಚಂದ್ರ ಮಿಶ್ರಾ ಎಂದೂ ಕರೆಯುತ್ತಾರೆ. ಇವರು ಒಬ್ಬ ಭಾರತೀಯ ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಬಿಹಾರದ ಮೊಂಗೈರ್ ಕ್ಷೇತ್ರಕ್ಕೆ ೧೯೫೨ ರಿಂದ ೧೯೫೭ ರವರೆಗೆ ಮೊದಲ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ೧೯೨೦ ರಲ್ಲಿ ಮಿಶ್ರಾ ಅವರು ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಉದ್ದೇಶದಿಂದ ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. == ಆರಂಭಿಕ ಜೀವನ == ಮಿಶ್ರಾ ಅವರು ಮೂಲತಃ ವೃತ್ತಿಯಲ್ಲಿ ಕೃಷಿಕರಾಗಿದ್ದರು, ಮತ್ತು ಸಮಾಜ ಸೇವಕರಾಗಿದ್ದರು . ಅವರು ಹಿಂದಿಯಲ್ಲಿ ಅನೇಕ ಪ್ರಕಟಣೆಗಳನ್ನು ಬರೆದಿದ್ದಾರೆ. == ಸಾವು == ಮಿಶ್ರಾ ಅವರು ೩೦ ಮಾರ್ಚ್ ೧೯೯೩ ರಂದು ತಮ್ಮ ೯೦ ನೇ ವಯಸ್ಸಿನಲ್ಲಿ ಬಿಹಾರದ ಮೊಂಗೈರ್‌ನಲ್ಲಿ ನಿಧನರಾದರು. == ಉಲ್ಲೇಖಗಳು ==